ಪ್ರಥಮ ಉಷಾಕಿರಣ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಅಶೋಕ ಪೈ ಬರೆದಿದ್ದು ಸುರೇಶ್ ಹೆಬ್ಲಿಕರ್ ನಿರ್ದೇಶಿಸಿದ್ದಾರೆ. ಇದು ಮಾನಸ ಆರ್ಟ್ಸ್ ಅಡಿ ನಿರ್ಮಾಣವಾಗಿದೆ. ಇದರ ಪ್ರಮುಖ ಪಾತ್ರಗಳಲ್ಲಿ ಸುರೇಶ್ ಹೆಬ್ಳೀಕರ್, ಗಿರೀಶ್ ಕಾರ್ನಾಡ್, ಗೀತಾ,ಪ್ರಮೀಳಾ ಜೋಷಾಯ್ ಮತ್ತು ವನಿತಾವಾಸು ಇದ್ದಾರೆ. ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ. ರಾಜನ್ ಅವರದು. ಚಿತ್ರವು ಮಕ್ಕಳ ಮನಶಾಸ್ತ್ರದ ಕುರಿತಾಗಿದ್ದು ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. 1989-90ರ ವರ್ಷದ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು 38ನೇ ದಕ್ಷಿಣದ ಫಿಲ್ಮ್ ಫೇರ್ ಅವಾರ್ಡ್ಸ್ ಗಳಿಸಿತು.ಅಷ್ಟೇ ಅಲ್ಲದೆ ಚಿತ್ರವೂ ಜಗತ್ತಿನ ಬೇರೆಬೇರೆ ಚಲನಚಿತ್ರೋತ್ಸವಗಳಲ್ಲಿ ತೆರೆಯನ್ನೂ ಕಂಡಿತು. == ಪಾತ್ರವರ್ಗ == == ಚಿತ್ರಸಂಗೀತ == ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ. == ಪ್ರಶಸ್ತಿಗಳು == ಈ ಚಿತ್ರವು 1990 ರಲ್ಲಿ ಅನೇಕ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿತು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1989-90 : 3ನೇ ಅತ್ಯುತ್ತಮ ಚಲನಚಿತ್ರ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ ಉತ್ತಮ ಬಾಲನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಮಾಸ್ಟರ್ ಡಮರುಗೇಂದ್ರನಿಗೆ 38ನೇ ದಕ್ಷಿಣ ಫಿಲಂಫೇರ್ ಪ್ರಶಸ್ತಿಗಳು 1990: ಉತ್ತಮ ಕನ್ನಡ ಚಲನಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ - ಮಾನಸ ಆರ್ಟ್ಸ್ ಗೆ